ಕೊಪ್ಪಳ: ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿಯ ಶಿವಪುರ ಗ್ರಾಮದಲ್ಲಿ ಎಸ್.ಸಿ ಕಾಲೋನಿಯಲ್ಲಿ ವಾಂತಿ ಬೇದಿ ಪ್ರಕರಣಗಳು ಕಂಡು ಬಂದಿದ್ದರಿಂದ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಹಿಟ್ನಾಳ ಉಪತಹಶೀಲ್ದಾರರು ಜೂನ್ 06ರಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಮುಂಜಾಗ್ರತ ಕ್ರಮವಾಗಿ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಚರಂಡಿ ಸ್ವಚ್ಛತೆ, ಬ್ಲಿಚಿಂಗ್ ಪೌಡರ ಸಿಂಪಿಡಿಸುವಂತೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹುಲಗಿ ವೈದ್ಯಾಧಿಕಾರಿಗಳು, ಹಿಟ್ನಾಳ ಕಂದಾಯ ನರೀಕ್ಷಕರು, ಗ್ರಾ.ಪಂ ಕಾರ್ಯದರ್ಶಿ ಹಾಗೂ ಪಂಚಾಯಿತಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.