ಆಂಧ್ರ ಪ್ರದೇಶ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ತನ್ನ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸಾಧಿಸಿದೆ. ಚಂದ್ರಯಾನ 3 ಉಡಾವಣೆ ಯಶಸ್ವಿಯಾಗಿದ್ದು, ಮೂಲಕ ನಭೋ ಮಂಡಲರದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹಾಜರಿದ್ದರು.
ಸರಿಯಾಗಿ ಮಧ್ಯಾಹ್ನ 2.35 ಕ್ಕೆ ಉಡಾವಣೆಯಾದ ಬಳಿಕ, ಉಡಾವಣೆಯಾದ ಸರಿ ಸುಮಾರು 16 ನಿಮಿಷಗಳ ನಂತರ, ಪ್ರೊಪಲ್ಷನ್ ಮಾಡ್ಯೂಲ್ ರಾಕೆಟ್‌ನಿಂದ ಬೇರ್ಪಡುವ ನಿರೀಕ್ಷೆಯಿದೆ ಮತ್ತು ಅಂಡಾಕಾರದ ಚಕ್ರದಲ್ಲಿ ಸುಮಾರು 5-6 ಬಾರಿ ಭೂಮಿಯನ್ನು ಸುತ್ತುತ್ತದೆ. ಇದರೊಂದಿಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವುದು ಮತ್ತು ರೋವರ್ನೊಂದಿಗೆ ಅದನ್ನು ಅನ್ವೇಷಿಸುವುದು ಈ ಮಿಷನ್‌ನ ಹಿಂದಿನವರಿಗೆ ಸಾಧ್ಯವಾಗದ್ದನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಯಶಸ್ವಿ ಆದರೆ ಸಾಫ್ಟ್ ಲ್ಯಾಂಡಿಂಗ್ ನಿಂದಾಗಿ ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.