ಬಾಗಲಕೋಟೆ : ರಾಜ್ಯದ ಎಲ್ಲಡೆ ನೆನ್ನೆ ಮೊಹರಂ ಹಬ್ಬದ ಕೊನೆಯ ದಿನ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬದ ವೇಳೆ “ಕೇಸರಿ ವಸ್ತ್ರ” ಹಿಡಿದು ಹೆಬ್ಬಳ್ಳಿ ಅಜ್ಜ ಲಾಲಸಾಬ್ ಅವರು ಭವಿಷ್ಯ ನುಡಿದಿದ್ದಾರೆ.
ಈ ವಿಚಾರ ಇದೀಗ ಭಾರಿ ಸದ್ದು ಮಾಡುತ್ತಿದೆ. ಬಾದಾಮಿ ತಾಲೂಕಿನ ಹರಬ್ಬಳ್ಳಿಯಲ್ಲಿ ಲಾಲಾಸಾಬ್ ‘ಕೇಸರಿವಸ್ತ್ರ’ ಹಿಡಿದು “ಇದರ ಸಲುವಾಗಿ ಬಹಳ ಬಡಿದಾಡುತ್ತಾರೆ. ಇದರ ಸಲುವಾಗಿ ಹೆಣಗಳು ಹೋಗುತ್ತದೆ. ಆದರೆ, ಬರೆದು ಇಟ್ಟುಕೊಳ್ಳಿ, ‘ಅದೇನೆ ಆದರೂ ಖುರ್ಚಿ ಮಾತ್ರ ಗಟ್ಟಿಯಾಗಿದೆ ಪಾ’ ಎಂದು ಇತ್ತೀಚಿಗಿನ ಧರ್ಮದ ನುಡುವಿನ ಜಗಳ ಹಾಗೂ ರಾಜಕಿಯ ವಿದ್ಯಮಾನವನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ. ಇದೀಗ ಲಾಲಸಾಬ್ ಅಜ್ಜ “ಅಜ್ಜನ ಭವಿಷ್ಯವಾಣಿ” ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸದ್ಯದಲ್ಲೇ ನಿರೀಕ್ಷಿಸಿ ನಿಮ್ಮ ಮುಂದೆ ಇನ್ನಷ್ಟು ವಿಚಾರಗಳೊಂದಿಗೆ ಬರಲಿದ್ದೇವೆ ನಮ್ಮ ವೆಬ್‌ಸೈಟ್ ಅನ್ನು ಸಬ್‌ಸ್ಕ್ರೈಬ್ ಮಾಡಿ, ಬೆಲ್ ಒತ್ತಿ ನಮ್ಮ ಪ್ರತಿ ಸುದ್ದಿಯೂ ಕೂಡಲೇ ನಿಮ್ಮ ಮೊಬೈಲ್‌ಗೆ ಬರಲಿದೆ. ಅದೇ ರೀತಿ ಈ ಕಳೆಗೆ ಇರುವ ಯೂಟೂಬ್ ಚಾನಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ…