ಚಂದ್ರಯಾನ 3 ಯಶಸ್ಸಿನಲ್ಲಿ ಗದುಗಿನ ಇಸ್ರೋ ವಿಜ್ಞಾನಿಯ ಕೊಡುಗೆ
ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತದ ಕಡೆ ತಿರುಗಿ ನೋಡುವಂತೆ ಭಾರತೀಯ ವಿಜ್ಞಾನಿಗಳ ಚಂದ್ರಯಾನ 3 ಯಶಸ್ಸಿನಲ್ಲಿ ಗದುಗಿನ ಇಸ್ರೋ ವಿಜ್ಞಾನಿ ಯೋರ್ವರ ಕೊಡುಗೆ ಪ್ರಮುಖವಾಗಿದೆ.
ಚಂದ್ರಯಾನ 3 ಅದ್ಭುತ ಯಶಸ್ಸು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಈ ಸಾಧನೆಯ ಹಿಂದೆ ಅನೇಕ ವಿಜ್ಞಾನಿಗಳು, ಇಂಜಿನಿಯರ್ಸ್, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅದರಲ್ಲಿ ಗದುಗಿನ ಇಸ್ರೋ ಹಿರಿಯ ವಿಜ್ಞಾನಿ ಸುದಿಂದ್ರ ವೆಂಕಣ್ಣಾಚಾರ್ಯ ಬಿಂದಗಿ ಕೂಡಾ ಪ್ರಮುಖರಾಗಿದ್ದಾರೆ.
ಸುದಿಂದ್ರ ಬಿಂದಗಿ ಅವರು 1986 ರಿಂದ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಉಪಗ್ರಹ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ತಿಂಗಳು ಜುಲೈ 30 ರಂದು ನಿವೃತ್ತರಾಗಿದ್ದಾರೆ. ಚಂದ್ರಯಾನ 3 ರಲ್ಲೂ ಅವರ ಸೇವೆ ಅನನ್ಯವಾಗಿದೆ.
1992 ರಲ್ಲಿ ಉಡಾವಣೆ ಉಪಗ್ರಹದ ಥರ್ಮಲ್ ಡಿಸೈನ್ ರ್ ಆಗಿ ಸೇವೆ ಪ್ರಾರಂಭಿಸಿದ ಬಿಂದಗಿ ಅವರು,ಇನ್ ಸಾಟ್, ಜಿ ಸಾಟ್ ಸೇರಿ 15 ಉಪಗ್ರಹಗಳ ಯಶಸ್ವಿ ಉಡಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಈ ಮೂಲಕ ಭಾರತದ ಬಾಹ್ಯಕಾಶ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.