BIG BREAKING : ಆಗಸ್ಟ್ 23 “ಹಿಂದೂಸ್ತಾನ್ ರಾಷ್ಟ್ರೀಯ ಬಾಹ್ಯಾಕಾಶ ದಿನ” ಎಂದು ಪ್ರಧಾನಿ ಮೋದಿ ಘೋಷಣೆ!!

You are currently viewing BIG BREAKING : ಆಗಸ್ಟ್ 23 “ಹಿಂದೂಸ್ತಾನ್ ರಾಷ್ಟ್ರೀಯ ಬಾಹ್ಯಾಕಾಶ ದಿನ” ಎಂದು ಪ್ರಧಾನಿ ಮೋದಿ ಘೋಷಣೆ!!

ಬೆಂಗಳೂರು : ಚಂದ್ರಯಾನ-3ರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಚಂದ್ರಯಾನ-3ರ ಆಗಸ್ಟ್.23ರಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿತ್ತು. ಈ ಮೂಲಕ ಭಾರತದ ಚಂದ್ರಯಾನ-3 ಯಶಸ್ವಿಆಗುವುದರ ಜೊತೆಗೆ ಇಡೀ ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸಿತು. ಇಂತಹ ಚಂದ್ರಯಾನ-3 ಯಶಸ್ವಿ ದಿನವಾದಂತ ಆಗಸ್ಟ್.23 ಅನ್ನು “ಹಿಂದೂಸ್ತಾನ್ ರಾಷ್ಟ್ರೀಯ ಬಾಹ್ಯಾಕಾಶ ದಿನ”ವಾಗಿ (National Space Day in India) ಪ್ರಧಾನಿ ಮೋದಿಯವರು ಘೋಷಿಸಿದ್ದಾರೆ.

ಇಂದು ಬೆಂಗಳೂರಿನ ಇಸ್ರೋ ಕಮಾಂಡಿಂಗ್ ಸೆಂಟರ್ ನಲ್ಲಿ ವಿಜ್ಞಾನಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, “ನಿಮ್ಮನ್ನು ಭೇಟಿಯಾಗಿದ್ದು, ನನಗೆ ತುಂಬಾ ಸಂತೋಷ ತಂದಿದೆ. ಇಸ್ರೋ ವಿಜ್ಞಾನಿಗಳ ಸಾಧನೆ ಇಡೀ ವಿಶ್ವವೇ ಕೊಂಡಾಡಿದೆ. ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಿ ಭಾವುಕರಾಗಿ ಈ ಮಾತುಗಳನ್ನು ಹೇಳಿದರು.

Leave a Reply

error: Content is protected !!