BREAKING : ಅಕ್ರಮ ಪಡಿತರ ಸಾಗಾಟ ವೇಳೆ ದಾಳಿ : 9 ಕ್ವಿಂಟಾಲ್ 50 ಕೆ.ಜಿ ಅಧಿಕ ಅಕ್ಕಿ ವಶ..!!

You are currently viewing BREAKING : ಅಕ್ರಮ ಪಡಿತರ ಸಾಗಾಟ ವೇಳೆ ದಾಳಿ : 9 ಕ್ವಿಂಟಾಲ್ 50 ಕೆ.ಜಿ ಅಧಿಕ ಅಕ್ಕಿ ವಶ..!!

ಬೆಳಗಾವಿ:  ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಡಚಿಯಲ್ಲಿ ಸುಮಾರು 32,300ರೂ ಬೆಳೆ ಬಾಳುವ ಅಕ್ರಮ ಪಡಿತರ ಅಕ್ಕಿಯನ್ನು ತೂಫಾನ್ ಕಂಪನಿಯ ಕೆಎ-23 ಎಂ-9506 ಕ್ರೂಜರ್ ವಾಹನದಲ್ಲಿ 9 ಕ್ವಿಂಟಲ್ 50 ಕೆಜಿ ಪಡಿತರ ಅಕ್ಕಿಯನ್ನು ಲೋಡ್ ಮಾಡಿಕೊಂಡು ಬೇರೆ ಕಡೆಗೆ ಸಾಗಾಟ ಮಾಡುವಾಗ ಪತ್ರಕರ್ತರ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯಿಂದ ಅಕ್ರಮ ಪಡಿತರ ಮೇಲೆ ದಾಳಿ ಮಾಡಿ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಸವದತ್ತಿ ತಾಲೂಕಿನ ಸೂಪ್ಪಡ್ಲ ಗ್ರಾಮದ ಸಾಬಣ್ಣ ಮಾರುತಿ ಮೇಗಾಡಿ ಹಾಗೂ ಸತೀಶ್ ಸಾಬಣ್ಣ ಮೇಗಾಡಿ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸದರಿಯವರ ಮೇಲೆ ಕಲಂ3 ಸಹಕಲಂ 7 ಅಗತ್ಯ ವಸ್ತುಗಳ ಕಾಯ್ದೆ 1955

ಕರ್ನಾಟಕ ಅವಶ್ಯ ವಸ್ತುಗಳ ನಿಯಂತ್ರಣ ಆದೇಶ 1992 ಅನುಬಂಧ 18 (ಎ) (ಬಿ)(ಸಿ)ನೇ ಪ್ರಕಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!