ಕುಕನೂರು : ಕಳೆದ ತಿಂಗಳು ಅಕ್ಟೋಬರ್ 4ರಂದು ತಾಲೂಕಿನ ತಳಬಾಳ ಬಳಿ ಬಾವಿಯೊಂದರಲ್ಲಿ ಪತ್ತೆ ಯಾದ ಮೃತ ದೇಹ ಪತ್ತೆಯಾಗಿತ್ತು,(ಚಂದ್ರೇಗೌಡ ನಂದನಗೌಡ,ವರ್ಷ 30) ಈ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಎ 1 ಆರೋಪಿಗಾಗಿ ಪೊಲೀಸರ ವಿಶೇಷ ತಂಡ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಪಟ್ಟಣದ ಕುಕುನೂರು ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ಒಂಟಿಗೋಡಿ, “ಎ 2 ಕೊಲೆ ಆರೋಪಿ ಸುಧೀರ ತಂದೆ ಶ್ರೀ ಹರಿ ಮಾನಕೊಂಡ ಇತನು ಆಂಧ್ರಪ್ರದೇಶ ರಾಜ್ಯದ ಮೂಲದವಾನಾಗಿದ್ದು, ಕೊಲೆಯಾದ ಬಳಿಕ ಮೃತ ವ್ಯಕ್ತಿಯ ಬೈಕ್ ಹಾಗೂ ಶೂ ಹಾಗೂ ಕೆಲ ಸಾಮಗ್ರಿಗಳನ್ನು ಚಿತ್ರದುರ್ಗದ ಹತ್ತಿರ ಎಸೆದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಈ ಕೃತ್ಯಕ್ಕೆ ಬಳಸಿದ ಕಾರ್ ಅನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಕೊಲೆಗೆ ನಿಖರವಾದ ಕಾರಣ ತಿಳಿದಬಂದಿಲ್ಲ. ಆರೋಪಿಗಳು ಕೊಲೆಯಾದ ವ್ಯಕ್ತಿಯ ಸ್ನೇಹಿತರು ಎಂದು ತಿಳಿದು ಬಂದಿದೆ. ಅದರಲ್ಲಿ ಒಬ್ಬರು ಬ್ಯಾಂಕ್ ಉದ್ಯೋಗಿ ಆಗಿದ್ದನು ಎಂಬ ಮಾಹಿತಿ ಇದೆ.
ರಾತ್ರಿ ಸಮಯ ಊಟಕ್ಕೆ ಎಂದು ಕರೆದುಕೊಂಡು ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಊರ ಹೊರ ವಲಯದ ತೋಟದಲ್ಲಿ ಆ ವ್ಯಕ್ತಿಯ ತಲೆಗೆ ಹೊಡೆದು ಕೈ ಕಾಲುಗಳನ್ನು ಕಟ್ಟಿ ಕಾರಿನ ಡಿಕ್ಕಿ ಯಲ್ಲಿ ಹಾಕಿಕೊಂಡು ಬಂದು ತಳಬಾಳ ಸಮೀಪದ ಬಾವಿಯಲ್ಲಿ ಹಾಕಿರುತ್ತಾರೆ ಎಂದು ಎಸ್ಪಿ ಯಶೋಧಾ ಒಂಟಿಗೊಡಿ ಮಾಹಿತಿ ನೀಡಿದರು.
ಕೆಲವ ಒಂದು ವಾರದ ಅಂತರದಲ್ಲಿ ಆರೋಪಿಗಳನ್ನು ಬಂದಿಸುವಲ್ಲಿ ಡಿ ವೈ ಎಸ್ ಪಿ ಶರಣಬಸಪ್ಪ ಸುಬೇದಾರ್ ನೇತೃತ್ವದಲ್ಲಿ, ಮೌನೇಶ್ವರ ಪಾಟೀಲ್ ಮುಂದಾಳತ್ವದಲ್ಲಿ ಕುಕನೂರು ಪೊಲೀಸ್ ಠಾಣೆಯ ಸಿಬ್ಬಂದಿಯ ವಿಶೇಷ ತನಿಕಾ ತಂಡವು ಯಾವುದೇ ಕುರುಹುಗಳಿಲ್ಲದ ಈ ಪ್ರಕರಣವನ್ನು ನಮ್ಮ ಪೊಲೀಸರು ಚಾಕಚಕ್ಯತೆಯಿಂದ ಭೇದಿಸಿದ್ದಾರೆ ಎಂದು ಎಸ್ ಪಿ ಸ್ಲಾಘಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್, ಸಿಪಿಐ ಮೌನೇಶ್ವರ ಪಾಟೀಲ್, ಕುಕುನೂರು ಠಾಣೆಯ ಪಿಎಸ್ಐ ಟಿ ಗುರುರಾಜ್, ತನಿಕಾ ಪಿಎಸ್ಐ ಕಾಶಿನಾಥ್ ಹಾಗೂ ಠಾಣೆ ಸಿಬ್ಬಂದಿ ಇದ್ದರು.