Wishes : ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು

You are currently viewing Wishes : ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು

ವಕ್ರತುಂಡ ಮಹಾಕಾಯನೇ ನೀನೇ ಪ್ರಥಮ ವಂದಿತ

1.) ಮೂಷಿಕ ವಾಹನ ಶಂಭುಸುತನೇ ನೀನೇ ಪ್ರಥಮ ವಂದಿತ

      ಗಡಿಗೆ ಉದರವ ಹೊತ್ತು ತಿರುಗಿದೆ ಕ್ಲೇಶ ಕಲಹವ ದಹಿಸಿದೆ

      ಸರ್ಪ ಜಠರಕೆ ಸುತ್ತಿದವನೇ ನೀನೇ ಪ್ರಥಮ ವಂದಿತ

      ಸುಬ್ರಮಣ್ಯ ಅಗ್ರಜ ಸಹಿತ ವಿಶ್ವ ಪರ್ಯಟನಕೆ ಬಾಜಿಯು

      ಪಿತನ ಪ್ರದಕ್ಷಿಣೆ ಮಾಡಿದವನೇ ನೀನೇ ಪ್ರಥಮ ವಂದಿತ

      ಗರಿಕೆ ಹುಲ್ಲು ಎಕ್ಕದ ಹೂವೇ ಪೂಜೆಗೈಯಲು ಬಳಕೆಯು

      ಮೋದಕ ಕಡುಬು ಸೇವಿಸಿದವನೇ ನೀನೇ ಪ್ರಥಮ ವಂದಿತ

      ಚಂದ್ರ ನಗುಲು ಏಕದಂತಕೆ ಶಪಿಸಿ ತಾಪ ಇಳಿಸಿದೆ

      ಅಂಧಕಾರ ತೊರೆದು ಬೆಳಗಿದವನೇ ನೀನೇ ಪ್ರಥಮ ವಂದಿತ

      ನಾಮ ಹಲವು ಗಣಪನಿಗೆ ಭಜಿಸಿ ಭಕ್ತಿ ಭಾವದಿ

      ಕಾಮ ಕ್ರೋದವ ಮರ್ದಿಸಿದವನೇ ನೀನೇ ಪ್ರಥಮ ವಂದಿತ

      ಗೌರಿ ತನಯ ಕುಮಾರ ಅನುಜನೇ ಧರೆಗೆ ಸುಧೆಯನು ಹರಡಿದೆ

      ಶೌರಿ ಅರ್ಜಿತ ಮೌರ್ಯಾಂಕಿತನೇ ನೀನೇ ಪ್ರಥಮ ವಂದಿತ

      ಪ್ರಜಾ ವೀಕ್ಷಣೆ ತಂಡದಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

Leave a Reply

error: Content is protected !!