LOCAL NEWS : ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಂದ ಪುಸ್ತಕ ಬಿಡುಗಡೆ!

You are currently viewing LOCAL NEWS : ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಂದ ಪುಸ್ತಕ ಬಿಡುಗಡೆ!

ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಂದ ಪುಸ್ತಕ ಬಿಡುಗಡೆ

ಗದಗ : ಜಿಲ್ಲಾ ಮುಂಡರಗಿ ಪಟ್ಟಣದ ವಿ.ಎಲ್. ನಾಡಗೌಡ್ರ ವಾಡೆಯಲ್ಲಿ: ಮನುಷ್ಯ ಜೀವನದಲ್ಲಿ ಸಫಲತೆ ಹೊಂದಬೇಕಾದರೆ ಶ್ರದ್ಧೆ, ಸಮರ್ಪಣೆ ಹಾಗೂ ಸಹನೆ ಇರಬೇಕು. ಪ್ರಕೃತಿದತ್ತವಾಗಿರುವ ವಿಚಾರಗಳನ್ನು ಒಪ್ಪಿಕೊಂಡು ಮುನ್ನಡೆದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಡಾ.ಬಿ.ಆ‌ರ್. ಅಂಬೇಡ್ಕರ್ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘದ 2ನೇ ವಾರ್ಷಿಕೋತ್ಸವ, ಜನಹಿತಚಿಂತನ ಕಾರ್ಯಕ್ರಮದಲ್ಲಿ ಲೇಖಕ ಬಸವರಾಜ ಬೆನ್ನೂರ ರಚನೆಯ ‘ಓ ಸೋಲೆ ಥ್ಯಾಂಕ್ಯೂ’ ಮತ್ತು ‘ಸೋಲು ಸೋಲಿಸದು’ ಪುಸ್ತಕಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಯಾವಾಗಲೂ ಸೋಲು ಪ್ರಕೃತಿ ಇಚ್ಛೆಯಂತೆ ಆಗುತ್ತದೆ ಹೊರತು ಮನುಷ್ಯನ ನಿರ್ಣಯದ ಮೇಲೆ ಸೋಲಾಗುವುದಿಲ್ಲ. ಜೀವನವನ್ನು ದಿಟ್ಟತನದಿಂದ ಎದುರಿಸಿ ನಡೆದಾಗ ವಿಶ್ವಾಸ ಮೂಡುತ್ತದೆ ಎಂದರು. ಗದಗ ಬಿಸಿಎಂ ಅಧಿಕಾರಿ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ಪ್ರತಿಭಾವಂತ ಸಾಹಿತಿಗಳ ಪೋತ್ಸಾಹಕ್ಕೆ ಇಂತಹ ಕಾರ್ಯಕ್ರಮ ಅಗತ್ಯ. ಸಹನೆ, ಪ್ರೀತಿ, ವಿಶ್ವಾಸದಿಂದ ಸಮಾಜದಲ್ಲಿ ಸಾಗಿದಾಗ ಸುಂದರ ಜೀವನ ಕಂಡುಕೊಳ್ಳಬಹುದು ಎಂದರು. ಓ ಸೋಲೆ ಥ್ಯಾಂಕ್ಯೂ ಮತ್ತು ಸೋಲು ಸೋಲಿಸದು ಪುಸ್ತಕಗಳನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಬಿಡುಗಡೆಗೊಳಿಸಿದರು. ಕವಿ ವಾಸುದೇವ ನಾಡಿಗ್ ಹಾಗೂ ಸಾಹಿತಿ ಡಾ. ನಿಂಗು ಸೊಲಗಿ ಪುಸ್ತಕಗಳ ಕುರಿತು ಮಾತನಾಡಿದರು. ಸೋಲು ಸೋಲಿಸದು ರಾಜ್ಯ ಮಟ್ಟದ ಲೇಖನಗಳ ಸ್ಪರ್ಧೆ ವಿಜೇತರಿಗೆ ಬಹುಮಾನ, ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ಬೆನ್ನೂರ ಅವರನ್ನು ಸನ್ಮಾನಿಸಲಾಯಿತು.

ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಆಶೀರ್ವದಿಸಿದರು. ತಾ.ಪಂ. ಇಒ ವಿಶ್ವನಾಥ ಹೊಸಮನಿ, ಡಾ.ಬಿ.ಆ‌ರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಬಿ.ಆ‌ರ್. ಅಂಬೇಡ್ಕ‌ರ್ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಅಡಿವೆಪ್ಪ ಚಲವಾದಿ ಅಧ್ಯಕ್ಷತೆ ವಹಿಸಿದ್ದರು.

 ವರದಿ: ವೀರೇಶ್ ಗುಗ್ಗರಿ,

Leave a Reply

error: Content is protected !!