BREAKING : ಹೆಸರಿಗಷ್ಟೇ ಸೀಮಿತವಾದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್-ಗಿರೀಶ್ ಹಿರೇಮಠ!

You are currently viewing BREAKING : ಹೆಸರಿಗಷ್ಟೇ ಸೀಮಿತವಾದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್-ಗಿರೀಶ್ ಹಿರೇಮಠ!

BREAKING : ಹೆಸರಿಗಷ್ಟೇ ಸೀಮಿತವಾದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್-ಗಿರೀಶ್ ಹಿರೇಮಠ!

ಕೊಪ್ಪಳ : ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾಮಟ್ಟದಲ್ಲಿ ಓಡಾಡಲು ಉಚಿತ ಬಸ್ ಪಾಸ್ ವಿತರಣೆ ಮಾಡೋದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿ ಅನುಷ್ಠಾನ ಮಾಡಿರುವುದು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು ಇದರಿಂದ ಯಾವುದೇ ಪತ್ರಕರ್ತರಿಗೂ ಪ್ರಯೋಜನವಿಲ್ಲ ಎಂದು ಆರೋಪಿಸಿದರು.

 ನಗರದಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದು ಅದರಲ್ಲಿ ಯಾವ ಪತ್ರಕರ್ತರೂ ಸಹ ಹೊಂದಿರದ ದಾಖಲೆಗಳನ್ನು ಕೇಳಿ ಯಾರಿಗೂ ಎಟುಕದ ಹಾಗೆ ಮಾಡಿರುವುದನ್ನು ಸರಿಪಡಿಸಿ ಪ್ರತಿಯೊಬ್ಬ ಗ್ರಾಮೀಣ ಪತ್ರಕರ್ತರಿಗೂ ಯೋಜನೆಯ ಲಾಭ ಸಿಗುವಂತಾಗಲಿ ಎಂಬ ಉದ್ದೇಶದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕೊಪ್ಪಳ ಜಿಲ್ಲಾ ಘಟಕ ಹಾಗೂ ಕುಕನೂರು ತಾಲೂಕ ಘಟಕದದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷ ಗಿರೀಶ್ ಹಿರೇಮಠ ಮಾತನಾಡುತ್ತಾ ಸರ್ಕಾರ ಘೋಷಣೆ ಮಾಡಿರುವ ಉಚಿತ ಬಸ್ ಪಾಸ್ ಸೌಲಭ್ಯ ಗ್ರಾಮೀಣ ಪತ್ರಕರ್ತರಿಗೆ ನಿಲುಕದ ನಕ್ಷತ್ರವೆಂಬಂತೆ ಬಾಸವಾಗಿದ್ದು ಇದರ ಪ್ರಯೋಜನ ಪಡೆಯುವುದು ಅಸಾಧ್ಯವಾದ ಮಾತಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೊಂದು ಬಾರಿ ಪರಿಶೀಲಿಸಿ ನಿಯಮಗಳ ಸಡಲಿಕ್ಕೆ ಮಾಡಿ ಪ್ರತಿ ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯ ಸಿಗುವಂತೆ ಅನುಕೂಲ ಕಲ್ಪಿಸಲಿ ಎಂದು ಒತ್ತಾಯ ಮಾಡಿದರು.

 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ದೊಡ್ಮನಿ ಮಾತನಾಡಿ ಗ್ರಾಮೀಣ ಪತ್ರಕರ್ತರ ಹೆಸರಿನಲ್ಲಿ ಯೋಜನೆಯನ್ನು ಜಾರಿ ತಂದಿರುತ್ತಾರೆ ಆದರೆ ನಿಬಂಧನೆಗಳ ಪ್ರಕಾರ ಒಂದು ಪತ್ರಿಕೆಗೆ ಜಿಲ್ಲೆಗೆ ಒಬ್ಬರಿಗೆ ಮಾತ್ರ ಅವಕಾಶ ಎಂಬ ಶರತ್ತು ವಿಧಿಸಿದ್ದು ಜಿಲ್ಲಾಮಟ್ಟದ ಪತ್ರಕರ್ತರಿಗೆ ಮಾತ್ರ ಎಂಬ ಸೂಚನೆ ವ್ಯಕ್ತವಾಗಿದ್ದು ಅದು ಸಹ ಕಾಯಂ ನಿಯಮಕಾತಿ ಹೊಂದಿರುವ ಪತ್ರಕರ್ತರಿಗೆ ಎಂದು ನಮೂದಿಸಲಾಗಿದೆ ವಾಸ್ತವದಲ್ಲಿ ಯಾರು ಸಹ ನೇಮಕಾತಿ ಆದೇಶ ಪ್ರತಿಯನ್ನು ಹೊಂದಿರುವುದಿಲ್ಲ ಆದ್ದರಿಂದ ಇದು ಸರ್ಕಾರ ಮಾಡಿರುವ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ ಎಂದು ಹೇಳಿದರು.

  ಈ ವೇಳೆಯಲ್ಲಿ ಸಂಘದ ಸದಸ್ಯರಾದ ಮಹೇಶ ಕಲ್ಮಠ, ಕೋಟೇಶ್ವರ ಮ್ಯಾಗಳಮನಿ, ರಣದಪ್ಪ, ಅಬ್ದುಲ್ ವಾಹಿದ್, ಇಮಾಮ್ ಹುಸೇನ್, ಸುನಿಲ್ ಕುಮಾರ್ ಮಠದ, ವೀರಯ್ಯ ಹಿರೇಮಠ, ಉದಯ್ ತೋಟದ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!