LOCAL EXPRESS : ಸಮಾಜದ ಅಂಕು ಡೊಂಕು ಸುಧಾರಿಸುವ ನಿತ್ಯ ಹೋರಾಟಕ್ಕೆ ಲೇಖನಿ ಬಳಸುವವವ ಪತ್ರಕರ್ತ : ನವೀನ್ ಗುಳಗಣ್ಣನವರ್

You are currently viewing LOCAL EXPRESS : ಸಮಾಜದ ಅಂಕು ಡೊಂಕು ಸುಧಾರಿಸುವ ನಿತ್ಯ ಹೋರಾಟಕ್ಕೆ ಲೇಖನಿ ಬಳಸುವವವ ಪತ್ರಕರ್ತ : ನವೀನ್ ಗುಳಗಣ್ಣನವರ್

ಕುಕನೂರು : “ಖಡ್ಗಕ್ಕಿಂತ ಹರಿತವಾದದ್ದು ಲೇಖನಿ. ಅದನ್ನು ಸಮಾಜದ ಅಂಕು ಡೊಂಕು ಸುಧಾರಿಸಲು ಬಳಕೆ ಮಾಡುವವರು ಪತ್ರಕರ್ತರು” ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣನವರ್ ಹೇಳಿದರು.

LOCAL EXPRESS : ವೀರಭದ್ರಶ್ವರ ಜಾತ್ರಾ ಮಹೋತ್ಸವ : ಅಗ್ನಿ ಕೊಂಡದೊಳಗೆ ಹೆಜ್ಜೆ ಹಾಕಿದ ಪುರವಂತರು.!

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಪತ್ರಕರ್ತ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಪತ್ರಿಕಾ ರಂಗಕ್ಕೆ ಪಾದಾರ್ಪಣೆ ಮಾಡಿರುತ್ತಾನೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ರೀತಿ ಪತ್ರಿಕಾ ರಂಗ ರಾಷ್ಟ್ರಾಭೀವೃದ್ಧೀಗೆ ಕಾರ್ಯ ಮಾಡುತ್ತಿದೆ. ಪತ್ರಕರ್ತರ ಲೇಖನಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ವ್ಯಕ್ತಿಯ ಬೆಳವಣಿಗೆಗೆ ಪತ್ರಿಕಾ ರಂಗ ಪೂರಕವಾಗಿದೆ ಎಂದರು.

ALERT : “ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ” ಆಯ್ಕೆಗೆ ಅರ್ಜಿ ಆಹ್ವಾನ

ಹಿರಿಯ ಸಾಹಿತಿ ಕೆ.ಬಿ ಬ್ಯಾಳಿ ಮಾತನಾಡಿದ, “ಪ್ರಜಾಪ್ರಭುತ್ವಕ್ಕೆ ಪತ್ರಿಕಾ ರಂಗ ಬುನಾದಿ ಆಗಿದೆ. ಪತ್ರಿಕಾ ರಂಗ ಗಟ್ಟಿಯಾದರೆ ಪ್ರಜಾಪ್ರಭುತ್ವ ಗಟ್ಟಿ ಆದಂತೆ. ಸೆ.15 ರಂದು ಪ್ರಜಾಪ್ರಭುತ್ವ ದಿನ. ಅಂದು ಸಿಎಂ ಸಂವಿಧಾನದ ಪೀಠಿಕೆ ಪ್ರಸ್ತಾವನೆ ವಿತರಣೆ ಆಗುತ್ತಿದೆ. ಆ ನಿಟ್ಟಿನಲ್ಲಿ ನಾನು ಸಂವಿಧಾನದ ಪೀಠಿಕೆಯನ್ನು ಮೊಮೆಂಟ್ಸ್ ತಯಾರಿಸಿ ಗೌರವಾರ್ಥ ಆಗಿ ಗಣ್ಯರಿಗೆ ವಿತರಿಸುತ್ತಿದ್ದೇನೆ. ಇದು ಪ್ರಥಮ ಎಂದು ಭಾವಿಸುತ್ತೇನೆ. 58 ಶಬ್ದಗಳಿಂದ ಕೂಡಿದ ಪೀಠಿಕೆ ಸಂವಿಧಾನದ ಆತ್ಮ ಆಗಿದೆ. ಇದು ಒಂದೇ ವಾಕ್ಯದಲ್ಲಿ ಇರುವ ಪೀಠಿಕೆ ಆಗಿದೆ. ಡಿಜಿಟಲ್ ಶಿಕ್ಷಣದಿಂದ ಮಕ್ಕಳಲ್ಲಿ ಓದುವ, ಬರೆಯುವ ಶಕ್ತಿ ಕುಂದಿದೆ. ಬೇಂದ್ರೆ ಜಗತ್ತು ಬದಲಾಗುವುದಿಲ್ಲ, ಜಗತ್ತು ಕರಗುತ್ತದೆ ಎಂದು ಆತ್ಮ ಇಲ್ಲದ ಯಾಂತ್ರೀಕ ಮಾನವ ಉಳಿಯುತ್ತಾನೆ ಎಂದಿದ್ದಾರೆ. ನಾವೆಲ್ಲಾ ಆತ್ಮೀಯತೆ ಮರೆಯುತ್ತಿದ್ದೇವೆ.ಆತ್ಮಾವಲೋಕನ ಮುಖ್ಯ” ಎಂದರು.

ALERT : “ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ” ಆಯ್ಕೆಗೆ ಅರ್ಜಿ ಆಹ್ವಾನ

ಪ್ರೀತಿಯನ್ನು ಬೆಳೆಸಬೇಕಿದೆ. ಪತ್ರಕರ್ತರನ್ನು ಪ್ರೀತಿಯಿಂದ ಕಾಣಬೇಕಿದೆ. ಕವಿಗಳ ಬಾಯಿ ಮುಚ್ಚುತ್ತಿದೆ. ಸಮಾಜದ ಸುಧಾರಣೆ ಬರೆಯುವ ಲೇಖನಿಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಬರವಣಿಗೆಗೆ ಮುಕ್ತ ಅವಕಾಶ ಇರಬೇಕು ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಮುಂದಿನ ದಿನಗಳಲ್ಲಿ ನಾಡಿನ ಪ್ರಜೆಗಳು ವಿದ್ಯಾರ್ಥಿಗಳು. ಅವರ ಮಧ್ಯೆ ಪತ್ರಿಕಾ ದಿನಾಚರಣೆ ಮಾಡುತ್ತಿರುವುದು ಶ್ಲಾಘನೀಯ.

ರಾಜಕೀಯ ವ್ಯವಸ್ಥೆ ಹದಗೆಡುತ್ತಿದೆ. ಈ ಮಧ್ಯೆ ಪತ್ರಕರ್ತರು ವಸ್ತು ನಿಷ್ಠ ವರದಿಗೆ ಎಂದಿಗೂ ರಾಜೀಯಾಗದೆ ಸಮಾಜ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. ಪತ್ರಿಕಾ ಓದುವ ಕೆಲಸ ಆಗಬೇಕು. ಸಾಮಾಜಿಕ ಜಾಲತಾಣದ ಮೊರೆ ಕೈ ಬಿಡಬೇಕು ಎಂದರು.

BREAKING : ಪಾಕಿಸ್ತಾನದ ವಿರುದ್ದ ಭಾರತಕ್ಕೆ 228 ರನ್ ಗಳ ಭರ್ಜರಿ ಜಯ..!!

ಹಿರಿಯ ಸಾಹಿತಿ ಆರ್.ಪಿ ರಾಜೂರು ಮಾತನಾಡಿ, ಡಿ.ವಿ.ಜಿ ಅವರ ಸಾಹಿತ್ಯ ಓದಿದರೆ ಬ್ರಹ್ಮಾಂಡ ಸುತ್ತಿದ ಅನುಭವ ಆಗುತ್ತದೆ. ಅವರ ಕಗ್ಗದಲ್ಲಿ ಸರ್ವತೋಮುಖ ವಿಷಯ ಉಂಟು. ಪತ್ರಕರ್ತರಾಗಿ, ಕವಿಯಾಗಿ ಸೇವೆ ಸಲ್ಲಿಸಿದ ಡಿವಿಜಿ ಶ್ರೇಷ್ಠ ಸಂತ ಪರಂಪರೆಯಲ್ಲಿ ಪಾರಮಾರ್ಥಿಕ ಅನುಭಾವಿಗಳಲ್ಲಿ ಒಬ್ಬರು ಎಂದರು. ಪತ್ರಿಕಾ ರಂಗ ಸುದ್ದಿ ಮಾಡುವ‌ ಸಿದ್ದಿ ಆಗಿದೆ. ಅದು ಉದ್ಯಮ ಆಗಬಾರದು. ಬದುಕುವುದಕ್ಕಾಗಿ ಪತ್ರಿಕಾ ರಂಗ ಅಲ್ಲಾ,ಸುಧಾರಣೆಗಾಗಿ ಪತ್ರಿಕಾ ರಂಗ ಕೆಲಸ ಮಾಡುತ್ತಿದೆ. ಅದೊಂದು ಪರಮಶಕ್ತಿ ಹೊಂದಿದೆ. ಜನ ಸೇವೆಗಾಗಿ ಪತ್ರಕರ್ತ ಸದಾ ತುಡಿತದಲ್ಲಿರಬೇಕು ಎಂದರು.

ಸಮಾಜ ಸೇವಕ ಶಿವರಾಜ ರಾಯರೆಡ್ಡಿ ಮಾತನಾಡಿ,ಪತ್ರಿಕೆ ಸಮಾಜದ ಕೈಗನ್ನಡಿ. ಪತ್ರಿಕೆಗಳಿಂದ ಘಟನಾವಳಿಗಳ ಮಾಹಿತಿ ತಿಳಿಯುತ್ತದೆ. ಸತ್ಯದ ಪರ ಪತ್ರಕರ್ತರು ಕೆಲಸ ಮಾಡುತ್ತಾರೆ. ಐದು ರೂ ಗೆ ಒಂದು ಚಾಕಲೇಟ್ ಸಿಗುವುದಿಲ್ಲ, ಅದರಲ್ಲೂ ಐದು ರೂ ದಲ್ಲಿ ಪತ್ರಿಕೆ ಸಿಗುತ್ತದೆ. ಆದಾಗ್ಯೂ ಓದುವ ರೂಢಿ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕಾಧ್ಯಕ್ಷ ನಾಗರಾಜ ಬೆಣಕಲ್ ಮಾತನಾಡಿ, ಪತ್ರಕರ್ತ ಪೆನ್ನು ಬರಹ ಎಂಬ ಸೂಜಿ ಮತ್ತು ದಾರಗಳಿಂದ ಹರಿದ, ಹದಗೆಟ್ಟಿದ ಸಮಾಜದ ಸುಧಾರಣೆಗೆ ಶ್ರಮಿಸುತ್ತಿವೆ ಎಂದರು.

ಪತ್ರಿಕಾ ಸಂಘದಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ನೆಲದ ಮೇಲೆ ಕಾರ್ಯಕ್ರಮದಲ್ಲಿ ಕೂಡಬಾರದು ಎಂದು ಶಾಲೆಗೆ ತಾಡಪತ್ರಿ ವಿತರಿಸಲಾಯಿತು. ವಿದ್ಯಾರ್ಥಿ ಕೊಟ್ರೇಶ್ ಸಂವಿಧಾನ ಪೀಠಕೆ ಬೋಧನೆ ಮಾಡಿದರು. ಗಣ್ಯರಿಗೆ ಸನ್ಮಾನಿಸಲಾಯಿತು. ಪತ್ರಕರ್ತ ಮುರಾರಿ ಭಜಂತ್ರಿ ಪ್ರಾರ್ಥಿಸಿದರು. ಪತ್ರಕರ್ತ ಅಲ್ಲಾವುದ್ದೀನ್ ಎಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರೇಶ್ ಆರುಬೆರಳಿನ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಮಂಜುನಾಥ ಅಂಗಡಿ, ವಿರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಈಶಪ್ಪ ಮಳಗಿ, ಎಂಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ, ಮುಖ್ಯ ಶಿಕ್ಷಕ ಎ.ಎಚ್ ಮುತ್ತಣ್ಣ,ಮುಖಂಡ ಪ್ರಕಾಶ ಬೋರಣ್ಣನವರ, ಸಂಘದ ಉಪಾಧ್ಯಕ್ಷರಾದ ಬಸವರಾಜ ಕೊಡ್ಲಿ, ವಿರೇಶ ಇಟಗಿ, ಹಾಗೂ ತಾಲೂಕು ಪತ್ರಕರ್ತರು, ವಿದ್ಯಾರ್ಥಿಗಳು, ಶಿಕ್ಷಕರು ಇತರರಿದ್ದರು.

Leave a Reply

error: Content is protected !!