BIG BREAKING : ಪ್ರತಿ ತಾಲೂಕಿನಲ್ಲಿ “ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆ” ಜಾರಿ : ಸಚಿವ ದಿನೇಶ್‌ ಗುಂಡೂರಾವ್‌

You are currently viewing BIG BREAKING : ಪ್ರತಿ ತಾಲೂಕಿನಲ್ಲಿ “ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆ” ಜಾರಿ : ಸಚಿವ ದಿನೇಶ್‌ ಗುಂಡೂರಾವ್‌

ಪ್ರಜಾ ವೀಕ್ಷಣೆ ಸುದ್ದಿಜಾಲ:-

ಬೆಂಗಳೂರು : ಇಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿರುವ “ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆ”ಯು ಗಮನಾರ್ಹ ಯಶಸ್ಸು ಕಂಡಿದ್ದು, ಈ ವರ್ಷವೇ ಉಳಿದ ಎಲ್ಲಾ ತಾಲೂಕುಗಳಲ್ಲೂ ಈ ಯೋಜನೆಯನ್ನು ಆರಂಭಿಸುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಠಾತ್ ಹೃದಯಾಘಾತವನ್ನು ತಪ್ಪಿಸಲು ನಮ್ಮ ಸರ್ಕಾರ ಆರಂಭಿಸಿರುವ ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆಯು ಮಹತ್ವದ ಯಶಸ್ಸು ಕಂಡಿದೆ. ಹೃದಯಾಘಾತದ ಸಂದರ್ಭದ ಅಮೂಲ್ಯ ಸಮಯದಲ್ಲಿ ಜನರ ಜೀವ ಉಳಿಸುವಲ್ಲಿ ನೆರವಾಗುತ್ತಿದೆ. ಇದನ್ನು ರಾಜ್ಯದ ಎಲ್ಲಾ ತಾಲೂಕಿಗೂ ವಿಸ್ತರಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಈಗಾಗಲೇ 2 ಹಂತಗಳಲ್ಲಿ 71 ತಾಲೂಕು ಆಸ್ಪತ್ರೆ ಸೇರಿ ಒಟ್ಟು 86 ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ಈ ವರ್ಷವೇ ಉಳಿದ ಎಲ್ಲಾ ತಾಲೂಕುಗಳಲ್ಲೂ ಈ ಯೋಜನೆಯನ್ನು ಆರಂಭಿಸುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.

Leave a Reply

error: Content is protected !!