ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದ್ದಾರೆ. ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ, ಸ್ಥಳ ಬದಲಾವಣೆ, ಹಾಗೂ ಹೊಸದಾಗಿ ಸದಸ್ಯರ ಸೇರ್ಪಡೆ ಸೇರಿದಂತೆ ಇತರೆ ತಿದ್ದುಪಡಿಗಳಿಗೆ ನಾಳೆವರೆಗೂ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಆ ದಿನಾಂಕವನ್ನು ವಿಸ್ತರಿಸೀರುವುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಪಡಿತರ ಚೀಟಿಯಲ್ಲಿ ತಿದ್ದುಪಡಿಯಲ್ಲಿ ಇಲ್ಲವೇ ಸೇರ್ಪಡೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಇಲಾಖೆಯು ಸೋಮವಾರದವರೆಗೆ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಈ ಮಧ್ಯ ಸರ್ಕಾರವು ಸಾರ್ವಜನಿಕರ ಒತ್ತಡಕ್ಕೆ ಮಣಿದು ಈಗ ತಿದ್ದುಪಡಿ, ಸೇರ್ಪಡೆ ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸಲಾಗುವುದು ಎಂದು ತಿಳಿದು ಬಂದಿದೆ.
ಆನ್‌ಲೈನ್ ಸೆಂಟರ್ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಸೇವೆ ಪಡೆಯಬಹುದಾಗಿದೆ. ಈಗ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಬಯೊಮೆಟ್ರಿಕ್ಸ್ ಮಾಡಿಸುವುದದಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಸದ್ಯಕ್ಕೆ ಯಜಮಾನನ ಹೆಸರಿನಲ್ಲಿರುವ ಪಡಿತರ ಚೀಟಿ ಯಜಮಾನಿಗೆ ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ ಹೊಸದಾಗಿ ಕಾರ್ಡ್ ಮಾಡಿಸಲು ಇನ್ನೂ ಅವಕಾಶ ನೀಡಿಲ್ಲ ಎಂದು ಇಲಾಖೆ ಸ್ಪಷ್ಟ ಪಡಿಸಿದೆ.